ಬಸವಣ್ಣ   
  ವಚನ - 287     
 
ಲೌಕಿಕರ ಕಂಡು ಆಡುವೆ ಹಾಡುವೆ; ತಾರ್ಕಿಕರ ಕಂಡು ಆಡುವೆ ಹಾಡುವೆ: ಸಹಜಗುಣವೆನ್ನಲಿಲ್ಲಯ್ಯಾ: ನಿಜಭಕ್ತಿಯೆನಗಿಲ್ಲ, ತಂದೇ ಏಕೋಭಾವ ಎನಗುಳ್ಳರೆ, ಏಕೆ ನೀ ಕರುಣಿಸೆ ಕೂಡಲಸಂಗಮದೇವಾ?
Hindi Translation लौकिकों को देख नाचता हूँ, गाता हूँ; तार्किकों को देख नाचता हूँ, गाता हूँ; हे पिता, मुझमें सहज गुण नहीं है, सच्ची भक्ति नहीं है, मुझमें एक भाव होता, तो कूडलसंगमदेव, तुम दया क्यों नहीं करते? Translated by: Banakara K Gowdappa