ಹೊನ್ನು ಹೆಣ್ಣು ಮಣ್ಣು ಬಿಡಿಸದ ಗುರಿವಿನ ಉಪದೇಶನೊಲ್ಲೆ,
ರೋಷ ಹರುಷವ ಕೆಡಿಸದ ಲಿಂಗಕ್ಕೆ ದಾಸೋಹವ ಮಾಡೆ,
ಪರಮಾನಂದವಲ್ಲದ ಪಾದೋದಕವ ಕೊಳ್ಳಿ,
ಪರಿಣಾಮವಲ್ಲದ ಪ್ರಸಾದವನುಣ್ಣೆ,
ಆನೆಂಬುದನಳಿಯದ ಈಶ್ವರೀಯ
ವರದ ಮಹಾಲಿಂಗನನೇನೆಂದೆಂಬೆ!
Art
Manuscript
Music
Courtesy:
Transliteration
Honnu heṇṇu maṇṇu biḍisada gurivina upadēśanolle,
rōṣa haruṣava keḍisada liṅgakke dāsōhava māḍe,
paramānandavallada pādōdakava koḷḷi,
pariṇāmavallada prasādavanuṇṇe,
ānembudanaḷiyada īśvarīya
varada mahāliṅgananēnendembe!