Index   ವಚನ - 1    Search  
 
ಆಸೆಯಾಮಿಷವಳಿದು ಹುಸಿ ವಿಷಯಂಗಳೆಲ್ಲಾ ಹಿಂಗಿ, ಸಂಶಯ ಸಂಬಂಧ ನಿಸ್ಸಂಬಂಧವಾಯಿತ್ತಯ್ಯಾ, ಎನ್ನ ಮನದೊಳಗೆ ಘನಪರಿಣಾಮವ ಕಂಡು ಮನ ಮಗ್ನವಾಯಿತ್ತಯ್ಯಾ, ಅಭಿನವ ಮಲ್ಲಿಕಾರ್ಜುನಾ, ಪ್ರಭುದೇವರ ಕರುಣದಿಂದಾನು ಬದುಕಿದೆನು.