Index   ವಚನ - 1    Search  
 
ದೇವ ಗೆದ್ದನು ದೇವ ಗೆದ್ದನು. ಸಿರಿಯಾಳಂಗೆ ಸೋಲವಾಗದು, ಸೋಲವಾಗದು. ಸರಿಯಾಯಿತ್ತು, ಸರಿಯಾಯಿತ್ತು. ತುಂಬೆಯಾಚಲೆಯ ಮನಃಪ್ರಿಯ ಚೆನ್ನಬಂಕೇಶ್ವರನಲ್ಲಿ ಚೀಲಾಳನವರ[ನು] ಕೊಂಡಾಡಿ, ಕೈಲಾಸವನಿವರು ಕೊಂಡಾಡರು. ಸರಿಯಾಯಿತ್ತು, ಸರಿಯಾಯಿತ್ತು.