Index   ವಚನ - 1    Search  
 
ಅಂಗಕ್ಕೆ ಲಿಂಗ ಆಚಾರ, ಲಿಂಗಕ್ಕೆ ಸರ್ವಕ್ರಿಯಾಸಂಬಂಧ ಆಚಾರ. ಆ ಆಚಾರಕ್ಕೆ ಸರ್ವಗುಣ ವಿಚಾರದಿಂದೆ ಬೀಜ ನಿರ್ಬೀಜನರಿದು ಕಾಬುದು ಕಾಣಿಸಿಕೊಂಬ ಉಭಯವ ವೇದಿಸಿ ಪರುಷ ಲೋಹವ ಗ್ರಹಿಸಿದಂತೆ ವಿಭೇದಕ್ಕೆ ಒಡಲಲ್ಲದೆ ನಿಂದ ನೆಲೆ, ಲಿಂಗ ಪ್ರಾಣದ ಕೂಟ; ಇದು ವಿಶುದ್ಧಿ, ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ನಿಷ್ಷತ್ತಿಯಾದ ನಿರ್ವೇದ.