ದೃಷ್ಟಿಯ ದೃಷ್ಟದಿಂದ ಮೋಹದ ಲವಲವಿಕೆ.
ಮೋಹದ ಲವಲವಿಕೆಯಿಂದ ಸ್ವರ್ಶನದ
ಉಭಯದ ಕೂಟ ಏಕವಾದಲ್ಲಿ
ಹಿಂದಣ ಕುರುಹು ಮುಂದಣ ಲಕ್ಷ್ಯ ಅಲಕ್ಷ್ಯನಾಗಿ
ದಂಪತಿ ದ್ವಂದ್ವವಿಲ್ಲದೆ,
ನಿಜವೆಂಬ ಕುರುಹು ಅರಿಕೆದೋರದೆ
ಅವಿರಳ ನಾಮಶೂನ್ಯವಾದದು
ಗೋಪತಿನಾಥ ವಿಶ್ವೇಶ್ವರಲಿಂಗವು ಹೃತ್ಕಮಲದಲ್ಲಿ
ವಿಶ್ರಾಂತಿಯಾದ ಇರವು.
Art
Manuscript
Music
Courtesy:
Transliteration
Dr̥ṣṭiya dr̥ṣṭadinda mōhada lavalavike.
Mōhada lavalavikeyinda svarśanada
ubhayada kūṭa ēkavādalli
hindaṇa kuruhu mundaṇa lakṣya alakṣyanāgi
dampati dvandvavillade,
nijavemba kuruhu arikedōrade
aviraḷa nāmaśūn'yavādadu
gōpatinātha viśvēśvaraliṅgavu hr̥tkamaladalli
viśrāntiyāda iravu.