Index   ವಚನ - 25    Search  
 
ನೆನಹೆ ಲಿಂಗವಾದ ಮತ್ತೆ ಮುಟ್ಟುವುದಕ್ಕೆ ಮಸ್ತಕವಿಲ್ಲ. ಮಾಡುವಾತ ವರ್ಮಜ್ಞನಾದಲ್ಲಿ ಇಕ್ಕಿಹೆ ಕೊಚ್ಚಿಹೆನೆಂಬುದು ನಷ್ಟವಾಯಿತ್ತು. ಅರಿದು ಚರಿಸುವ ವಿರಕ್ತಂಗೆ ತಥ್ಯಮಿಥ್ಯವಳಿದಲ್ಲಿ ಹೊಕ್ಕೆಹೆ ಹೊರಟಿಹೆ ಇದಿರ ಚಿತ್ತವನರಿದೆಹೆನೆಂಬ ಗೊತ್ತುಗೆಟ್ಟಿತ್ತು. ಇಂತೀ ಭೇದಂಗಳ ಭೇದಿಸಿ ವಿಭಾಗಿಸದೆ ವಾಯುವಿನ ಕೈಯ ಗಂಧದಂತೆ ನಾಸಿಕಕ್ಕೆ ವಾಸನೆ ತೋರಿ ಹಿಡಿದೆಹೆನೆಂದಡೆ ಬುಡ ಸಿಕ್ಕದೆ ತ್ರಿವಿಧಭಕ್ತಿ ಸನ್ನದ್ಧನಾಗಿಪ್ಪ ಸದ್ಭಕ್ತನ ಶ್ರೀಪಾದವೆ ಗೋಪತಿನಾಥ ವಿಶ್ವೇಶ್ವರಲಿಂಗವಿಪ್ಪ ಆಲಯ.