Index   ವಚನ - 27    Search  
 
ಪರಬ್ರಹ್ಮದಿಂದ ಅಪರವ ಕಾಬುದು ಅಪರದಿಂದ ಪರಾಪರವ ಧ್ಯಾನಿಸುವುದು. ಧ್ಯಾನ ತಧ್ಯಾನವಾದಲ್ಲಿ ಮೂರ್ತಿಯ ನಿಜ ನಿಃಕಲಲೀಯ ಅದು ತ್ರಿವಿಧ ನಾಮನಷ್ಟ, ತ್ರಿವಿಧಾತ್ಮಸೂತಕ ನಾಶನ ಗೋಪತಿನಾಥ ವಿಶ್ವೇಶ್ವರಲಿಂಗವು ಅವಿರಳ ಸಂಬಂಧಿ.