Index   ವಚನ - 30    Search  
 
ಬೆಳೆಯಿಸಿಕೊಂಬುದು ನೀರೊ ನೆಲನೊ ಬೀಜವೊ ಎಂಬುದ ತಿಳಿದು, ಕರ್ಮವರ್ಮ ಕೂಟಂಗಳ ಆಟವನರಿತು ವರ್ತನಕ್ಕೆ ಕ್ರೀ ಸತ್ಯಕ್ಕೆ ಜ್ಞಾನ ಜ್ಞಾನಕ್ಕೆ ಸರ್ವಜೀವದ ವ್ಯಾಪಾರ ಭೇದ. ಅದು ಸಂಪದ ಸಂಬಂಧ ತತ್ವ ಗೋಪತಿನಾಥ ವಿಶ್ವೇಶ್ವರಲಿಂಗದ ಕ್ರಿಯಾನಿರ್ವಾಹ.