Index   ವಚನ - 37    Search  
 
ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡು ಅನುಮಾನದಲ್ಲಿ ಅರಿದು ಮತ್ತೆ ಉಪದೃಷ್ಟದಲ್ಲಿ ಅನ್ಯಭಿನ್ನವ ಮಾಡಿ ಕೇಳಲೇತಕ್ಕೆ? ತಾನರಿದ ಕಲೆಯ ಇದಿರಲ್ಲಿ ದೃಷ್ಟವ ಕೇಳಲೇತಕ್ಕೆ? ಇದು ಪರಿಪೂರ್ಣಭಾವ, ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ಉಭಯವಳಿದ ಕೂಟ.