ಸ್ಥಲಂಗಳನರಿದು ಆಚರಿಸುವಲ್ಲಿ
ಮೂರನರಿದು ಮೂರ ಮರೆದು ಮೂರ ವೇದಿಸಿ
ಐದ ಕಾಣಿಸಿಕೊಂಡು ಆರರ ಅರಿಕೆ ಹಿಂಗಿ
ಮತ್ತಿಪ್ಪತ್ತೈದರ ಭೇದವಡಗಿ
ಮತ್ತೊಂದರಲ್ಲಿ ಕಂಡೆಹೆನೆಂಬ ಸಂದು ಸಲೆ ಸಂದು
ಒಂದಿ ಒಂದಾಹನ್ನಕ್ಕ
ಗೋಪತಿನಾಥ ವಿಶ್ವೇಶ್ವರಲಿಂಗವೆಂಬ
ಉಭಯನಾಮ ಬಿಡದು.
Art
Manuscript
Music
Courtesy:
Transliteration
Sthalaṅgaḷanaridu ācarisuvalli
mūranaridu mūra maredu mūra vēdisi
aida kāṇisikoṇḍu ārara arike hiṅgi
mattippattaidara bhēdavaḍagi
mattondaralli kaṇḍ'̔ehenemba sandu sale sandu
ondi ondāhannakka
gōpatinātha viśvēśvaraliṅgavemba
ubhayanāma biḍadu.