Index   ವಚನ - 1    Search  
 
ಅಖಂಡಿತವ ಕಂಡೆನೆಂಬೆ; ಕಂಡಡೆ ಖಂಡಿಯಾಗಿ ಬ್ರಹ್ಮಾಂಡವಿರಬೇಕು. ಓದಿದೆನೋದಿದೆನೆಂದೆಂಬೆ ನಿನ್ನ ಓದು ವಾದಿಂಗೆ ಹೋಯಿತ್ತು. ಅರಿದೆನರಿದೆನೆಂದೆಂಬೆ ಅರಿದುದನೆಲ್ಲವನರಿದೆ, ಅರಿಯದುದಕ್ಕೆಂತೊ? ನವನಾಳವನು ಕಟ್ಟಿ ವಿಕಳನಾಗಲುಬೇಡ. ಬಳಸಿ ಬಟ್ಟೆಯ ಕಾಣದೆ ಬಾಯ ಬಾಗಿಲ ಹೊದ್ದೆ. ಮಕ್ಕಳ ತೊಟ್ಟಿಲ ಮೇಲೆ ಕಟ್ಟಿದ ಕೆಂಪಿನ ಹಣ್ಣ ಪಟ್ಟಿರ್ದು ನಿಲುಕಲು ಬಾರದು ನೇಹ ನೆಲೆಗೊಳ್ಳದಾಗಿ ನಿಜಭಾವ ನಿಜರೂಪು ನಿಜಭುಜ ವಿಜಯನು ಗಜೆಬಜೆಯಿಲ್ಲದ ಮನಕ್ಕೆ ಸಹಜವ ತೆಲುಗೇಶ ತೋರಿದ.