ದಶಕರ ಶೂನ್ಯ ಪಂಚಕರ ಭಿಕ್ಷವ ಬೇಡಿ,
ಆನಂದದಲಾಡಿ, ಪಾಪಾಂಧಕ್ಷಯಮಂ ಮಾಡಿ,
ಅನುಶ್ರುತವೇರಿ, ಷಡುರುತಂ ಪೆರ್ಚಿ,
ಮಲಕುವಿಡಿದು, ವೀಥಿವೀಥಿಗೊಂಡು
ಪೋಗಿ ತೋರುವವರ ವಂಕಮಂ ಪೊಕ್ಕು,
ಆ ಉಭಯವತಿಯೆಂಬ ಶಂಕರಾನಂದರಸ ಉಕ್ಕುತ್ತಿದ್ದು,
ಎಸಗೆ ಸಮನಿಸುಗೆ ನಯಸರವ ಕಿವಿಯಲಾಂತು,
ನಂದಿನಂದಿಯೆಂದಾನಂದದಿಂದುಂಡು,
ಕೈಯ ಮಂಡೆಗೆ ಹತ್ತಿಸಿ,
ಮುಳ್ಳಕಲ್ಲು ಮುಂಜಾರಿನಲ್ಲಿರಿಸಿ, ಕರ ಹೇಸಿ,
ಏಳೂರವರು ಲಾಲಿಸಿ,
ಕೇಳಲಮ್ಮದೆ ಬೆಚ್ಚುತ್ತ ಬೆದರುತ್ತ ಬಿದ್ದರು.
ಮುಚ್ಚುಮರೆಯ ಅಚ್ಚುಗವಿಕ್ಕು ಪ್ರ......
......ಯಲಳಿದ ಗುರು ಗೌರವಂ ತಂದಾರಾಧಿಸಿ,
ವಿರಾಜಿಸಿದ ಶಂಕರಾ
ಜಂಗಮ ಶಂಕರಾನಂದರಸನಯ್ಯಾ,
ತ್ರಿಲೋಚನಶಂಕರಾ.
Art
Manuscript
Music
Courtesy:
Transliteration
Daśakara śūn'ya pan̄cakara bhikṣava bēḍi,
ānandadalāḍi, pāpāndhakṣayamaṁ māḍi,
anuśrutavēri, ṣaḍurutaṁ perci,
malakuviḍidu, vīthivīthigoṇḍu
pōgi tōruvavara vaṅkamaṁ pokku,
ā ubhayavatiyemba śaṅkarānandarasa ukkuttiddu,
esage samanisuge nayasarava kiviyalāntu,
nandinandiyendānandadinduṇḍu,
kaiya maṇḍege hattisi,
muḷḷakallu mun̄jārinallirisi, kara hēsi,
ēḷūravaru lālisi,
kēḷalam'made beccutta bedarutta biddaru.
Muccumareya accugavikku pra......
......Yalaḷida guru gauravaṁ tandārādhisi,
virājisida śaṅkarā
jaṅgama śaṅkarānandarasanayyā,
trilōcanaśaṅkarā.