Index   ವಚನ - 6    Search  
 
ಪೃಥ್ವಿಯ ಅಂಶಿಕ ಅಂಗವಾಗಿ, ಅಪ್ಪುವಿನ ಅಂಶಿಕ ಶುಕ್ಲ ಶೋಣಿತವಾಗಿ, ತೇಜದ ಅಂಶಿಕ ಹಸಿವಾಗಿ, ವಾಯುವಿನಂಶಿಕ ಜೀವಾತ್ಮನಾಗಿ, ಆಕಾಶದ ಅಂಶಿಕ ಬ್ರಹ್ಮರಂಧ್ರವಾಗಿ, ಇಂತೀ ಐದರ ಗುಣವುಳ್ಳನ್ನಕ್ಕ ಗೆಲ್ಲ ಸೋಲ ಬಿಡದು. ಇವನಲ್ಲಿಗಲ್ಲಿಯೆ ಇಂಬಿಟ್ಟು ಇಂತೀ ಲಲ್ಲೆಯ ಬಿಡಿಸಯ್ಯಾ. ಎನ್ನಲ್ಲಿ ನಿಮಗೆ ಖುಲ್ಲತನ ಬೇಡ. ಅದು ಎನ್ನ ಸೋಂಕಲ್ಲ, ಅದು ನಿನ್ನ ಸೋಂಕು ದಸರೇಶ್ವರಲಿಂಗಾ.