ಪಾದದಲ್ಲಿ ಪಾದೋದಕ.
ಆ ಪಾದತೀರ್ಥವನು ಲಿಂಗಕ್ಕೆ ಮಜ್ಜನಕ್ಕೆರೆಯಬೇಕೆಂಬ
ಇಚ್ಫೆ ಹುಟ್ಟಿದಲ್ಲಿ ಲಿಂಗೋದಕ.
ಮಜ್ಜನಕ್ಕೆರದಲ್ಲಿ ಮಜ್ಜನೋದಕ.
ಜಿಹ್ವೆಯಲ್ಲಿ ಪಂಚಾಂಗುಲದಿ ಸ್ವೀಕರಿಸಿದ್ದೇ ಸ್ಪರ್ಶನೋದಕ.
ಎಚ್ಚರಿಕೆ ಸಾವಧಾನದಿಂದ ಸೇವಿಸಿದ್ದೇ ಅವಧಾನೋದಕ.
ಸಲಿಸಿ ಸಂತೋಷವಾದರೆ ಆಪ್ಯಾಯನೋದಕ.
ಹಸ್ತದೊಳಗಿರ್ದ ತೀರ್ಥವನು ಸಲಿಸಿದ್ದೇ ಹಸ್ತೋದಕ.
ಆ ಬಟ್ಟಲಲ್ಲಿದ್ದ ತೀರ್ಥವನು ಮೂರುಸಲ
ಸ್ವೀಕರಿಸಿದ್ದೇ ಪರಿಣಾಮೋದಕ.
ಆ ಪಾದೋದಕವನು ಅಂತಿಂತೆಂದು
ಹೆಸರಿಡಲಿಲ್ಲವಾಗಿ ನಿರ್ನಾಮೋದಕ.
ಬ್ರಹ್ಮರಂಧ್ರದಲ್ಲಿರ್ದುದೇ ಚಿದಮೃತವೆಂದು
ಭಾವಿಸುವುದೇ ಸತ್ಯೋದಕ.
ಇಂತೀ ದಶವಿಧ ಪಾದೋದಕವನು
ಎನ್ನಂತರಂಗದಲ್ಲಿ ತಿಳಿದು
ನಾನು ಸದ್ಯೋನ್ಮುಕ್ತನಾದೆನಯ್ಯಾ ಗುರುಶಾಂತೇಶ್ವರಾ.
Art
Manuscript
Music
Courtesy:
Transliteration
Pādadalli pādōdaka.
Ā pādatīrthavanu liṅgakke majjanakkereyabēkemba
icphe huṭṭidalli liṅgōdaka.
Majjanakkeradalli majjanōdaka.
Jihveyalli pan̄cāṅguladi svīkarisiddē sparśanōdaka.
Eccarike sāvadhānadinda sēvisiddē avadhānōdaka.
Salisi santōṣavādare āpyāyanōdaka.
Hastadoḷagirda tīrthavanu salisiddē hastōdaka.
Ā baṭṭalallidda tīrthavanu mūrusala
svīkarisiddē pariṇāmōdaka.
Ā pādōdakavanu antintendu
hesariḍalillavāgi nirnāmōdaka.
Brahmarandhradallirdudē cidamr̥tavendu
bhāvisuvudē satyōdaka.
Intī daśavidha pādōdakavanu
ennantaraṅgadalli tiḷidu
nānu sadyōnmuktanādenayyā guruśāntēśvarā.