Index   ವಚನ - 1    Search  
 
ಅಂಗದಲ್ಲಿ ಲಿಂಗ ವೇಧಿಸಬೇಕೆಂಬಲ್ಲಿ ಅಂಗಕ್ಕೂ ಲಿಂಗಕ್ಕೂ ಏನು ಸಂಬಂಧ? ಅಂಗದ ಮೇಲೆ ವಿಷವ ತೊಡೆಯಲಿಕ್ಕಾಗಿ ಚರ್ಮ ಹಿಂಗದೆ ಆತ್ಮಂಗೆ ಲಹರಿ ಕೊಂಡುದುಂಟೆ? ಇಂತೀ ಅಂಗ ಲಿಂಗದಲ್ಲಿ ಅರ್ಚನೆ ಆವರಿಸಿ ಆತ್ಮ ಸ್ಥಿರೀಕರಿಸಿ ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.