Index   ವಚನ - 2    Search  
 
ಅಗ್ನಿಯ ಕಳೆ ಐದು ಗುಣ, ಜ್ಯೋತಿಯ ಕಳೆ ಹಲವು ಗುಣ. ರತ್ನದ ಕಳೆ ನವಗುಣ, ಚಿತ್ತದ ಕಳೆ ವಿಶ್ವತೋಮುಖ. ಸುಚಿತ್ತದ ಕಳೆ ಏಕಜ್ಯೋತಿಯಾಗಿಪ್ಪುದ ತಿಳಿದು ಇಷ್ಟದ ಲಕ್ಷ್ಯದಲ್ಲಿ ಬೈಚಿಟ್ಟಾತ ಪ್ರತ್ಯಕ್ಷ ಪರಮಸುಖಿ. ಮರ್ತ್ಯ ಕೈಲಾಸವೆಂಬ ಗುಟ್ಟಿನ ಕೊಳಕಿಲ್ಲ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.