Index   ವಚನ - 13    Search  
 
ಇಂತೀ ಪಿಂಡಸ್ಥಲ ಪಿಂಡಜ್ಞಾನಸ್ಥಲ ಜ್ಞಾನ ಉದಯ ಸ್ಥಲ ಜ್ಞಾನ ದಿವ್ಯ ಪರಿಪೂರ್ಣಸ್ಥಲ. ಈ ಗುಣ ಸಂಗನಬಸವಣ್ಣನ ಕ್ರೀ ಚನ್ನಬಸವಣ್ಣನ ಜ್ಞಾನ, ಪ್ರಭುದೇವರ ಅರಿವು, ನಿಜಗುಣನ ನಿಃಕಲ, ಅಜಗಣ್ಣನ ಐಕ್ಯ, ಸಿದ್ಧರಾಮತಂದೆಯ ಶ್ರದ್ಧೆ, ಮರುಳಶಂಕರನ ನಿಜ, ಘಟ್ಟಿವಾಳಯ್ಯನ ದಿಟ್ಟತನ, ಅಕ್ಕಗಳ ಪರಮ ನಿರ್ವಾಣ ಇಂತೀ ಪ್ರಮಥಶಕ್ತಿ ಭಕ್ತಿಯೊಳಗಾದ ಶರಣಸಂಕುಳಕ್ಕೆ ನಮೋ ನಮಃ ಎಂಬೆನು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.