Index   ವಚನ - 48    Search  
 
ದೀಕ್ಷಾಗುರುವಾಗಿ ಬಂದು ಬ್ರಹ್ಮನ ಉತ್ಪತ್ಯವ ತೊಡೆದೆ, ಶಿಕ್ಷಾಗುರುವಾಗಿ ಬಂದು ಆತ್ಮನ ಪ್ರಕೃತಿಯ ಕೆಡಿಸಿದೆ; ಮೋಕ್ಷಗುರುವಾಗಿ ಬಂದು ತ್ರಿವಿಧ ಮಲವ ಕೆಡಿಸಿ ಮುಕ್ತನ ಮಾಡಿದೆ. ಎನ್ನ ಲೀಲೆಗೆ ಗುರು ರೂಪಾಗಿ, ಸುಲೀಲೆಗೆ ಲಿಂಗರೂಪಾಗಿ, ನಿಜಲೀಲೆಗೆ ಜಂಗಮರೂಪಾಗಿ, ಇಂತೀ ತ್ರಿವಿಧ ರೂಪಾಗಿ ಭಿನ್ನನಾದೆಯಲ್ಲಾ ಭಕ್ತಿ ಕಾರಣನಾಗಿ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.