Index   ವಚನ - 57    Search  
 
ಪೃಥ್ವೀತತ್ತ್ವದಿಂದ ಭಕ್ತಿರೂಪು, ಅಪ್ಪು ತತ್ತ್ವದಿಂದ ಮಾಹೇಶ್ವರರೂಪು, ತೇಜ ತತ್ತ್ವದಿಂದ ಪ್ರಸಾದಿ ರೂಪು, ವಾಯು ತತ್ತ್ವದಿಂದ ಪ್ರಾಣಲಿಂಗಿ ರೂಪು, ಆಕಾಶ ತತ್ತ್ವದಿಂದ ಶರಣ ರೂಪು, ಇಂತೀ ಪಂಚತತ್ತ್ವವನವಗವಿಸಿ ಮಹದಾಕಾಶ ಅವಕಾಶವಾದುದು ಐಕ್ಯನ ಅಂತರಿಕ್ಷೆ. ನಿರ್ಮುಕ್ತ ಸ್ವಯಸ್ವಾನುಭಾವದಿಂದ ಸಾವಧಾನವನರಿವುದು ಷಟ್ಕರ್ಮನಾಶನ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು