Index   ವಚನ - 58    Search  
 
ಪೃಥ್ವೀತತ್ತ್ವದೊಳಗಾದವೈದು, ಅಪ್ಪುತತ್ತ್ವದೊಳಗಾದವೈದು, ತೇಜ ತತ್ತ್ವದೊಳಗಾದವೈದು, ವಾಯು ತತ್ತ್ವದೊಳಗಾದವೈದು, ಆಕಾಶತತ್ತ್ವದೊಳಗಾದವೈದು, ಇಂತೀ ಇಪ್ಪತ್ತೈದು ತತ್ತ್ವವನವಗವಿಸಿದ ಮೂಲತತ್ತ್ವವೈದು, ಇಂತೀ ಮೂವತ್ತಾಕ್ಕೆ ವಿಭೇದದಿಂದ ಸಾಧನೆಗೊಳಗಾದವಾರು. ಇಂತೀ ಮೂವತ್ತಾರು ತತ್ತ್ವಂಗಳ ನಿಶ್ಚಯಿಸಿ ಕಂಡು, ನಿತ್ಯಾನಿತ್ಯವ ತಿಳಿದು, ಭಕ್ತಿ ಜ್ಞಾನ ವೈರಾಗ್ಯಗಳೆಂಬಿವ ನಿಶ್ಚಯಿಸಿ, ಲಿಂಗ ನಿಜತತ್ವದಲ್ಲಿ ಆತ್ಮನ ಸಂಘಟ್ಟವ ಮಾಡಿ, ಉಚಿತದ ಸಂದನರಿದು ಅಳಿವುದು ಸಾವಧಾನಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.