Index   ವಚನ - 63    Search  
 
ಬೇವಿನ ಮರನನೇರಿ ಬೆಲ್ಲವ ಮೆದ್ದಡೆ ಕಹಿಯಾದುದುಂಟೆ? ಕಾಳೋರಗನ ಹೆಡೆಯ ಮೆಟ್ಟಿ ಹಾಲ ಕುಡಿದಡೆ ಹಾಲಾಹಲ ಒಡಲನೇರಿದುದುಂಟೆ? ಸಂಜೀವನದ ಫಲವ ಕಂಡು ಚಪ್ಪಿರಿದಲ್ಲಿ ಆತ್ಮಕ್ಕೆ ಸಲೆ ಸಂದುದುಂಟೆ? ಇಂತೀ ಅವಗುಣವನರಸದೆ ಗುಣಜ್ಞ ತಾನಾದ ಮತ್ತೆ ಅವಗುಣ ವೇಷದಲ್ಲಿ ಅಡಗಿತ್ತು, ಸದ್ಗುಣ ವಸ್ತುವಿನಲ್ಲಿ ಹೊದ್ದಿತ್ತು. ಇಂತೀ ಗುರುವಿನ ಇರವ ವಿಚಾರಿಸಿದಲ್ಲಿ ಭಕ್ತಿ ಹಾರಿತ್ತು, ಸತ್ಯ ಜಾರಿತ್ತು, ವಿರಕ್ತಿ ತೂರಿತ್ತು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.