Index   ವಚನ - 64    Search  
 
ಭಕ್ತಂಗೆ ಮೂರು ಗುಣ, ಮಾಹೇಶ್ವರಂಗೆ ಆರು ಗುಣ, ಪ್ರಸಾದಿಗೆ ಎಂಟು ಗುಣ, ಪ್ರಾಣಲಿಂಗಿಗೆ ಹತ್ತು ಗುಣ, ಶರಣಂಗೆ ಹದಿನಾರು ಗುಣ, ಐಕ್ಯಂಗೆ ಐವತ್ತೆರಡು (ಗುಣ). ಸರನಾದು ಭೇದ ನಿಂದಲ್ಲಿ ಒಂದೆ ಗುಣ ಸಂದಿತ್ತು. ಇದು ಕ್ರಿಯಾಸ್ಥಲ ನಿರ್ವಾಹ. ಸಂಗನ ಬಸವಣ್ಣನ ಆದಿ, ಚನ್ನಬಸವಣ್ಣನ ಅನಾದಿ ಶರಣ ಸಂತತಿಯ ಸಂಬಂಧ ಮಾರ್ಗ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.