ಭಕ್ತ ಮಾಹೇಶ್ವರ ಪ್ರಸಾದಿ ಈ ತ್ರಿವಿಧ ಒಂದೆ ಬೀಜ;
ತಲೆವಿಡಿಯಿಲ್ಲ.
ಪ್ರಾಣಲಿಂಗಿ ಶರಣ ಐಕ್ಯ ಇಂತೀ ತ್ರಿವಿಧ ಒಂದೇ ಬೀಜ;
ತಲೆವಿಡಿಯಿಲ್ಲ.
ವಸ್ತು-ವಸ್ತುಕದಂತೆ, ಶಿಲೆ-ಕಾಂತಿಯಂತೆ,
ಕುಸುಮ-ಗಂಧದಂತೆ, ಪತಿ-ಸತಿಯಂತೆ ಭಕ್ತಿ ಘಟ;
ಅರಿವೆ ವಸ್ತುಸ್ವರೂಪವಾಗಿ ಷಡಸ್ಥಲವನವಗವಿಸಿ ನಿಂದ ಸ್ವರೂಪ;
ಬಸವಣ್ಣ ಚನ್ನಬಸವಣ್ಣ ಶರಣತತಿ ಮುಂತಾದ
ಸಿದ್ಧಾಂತ ಉಭಯಸ್ಥಲ ನಿರ್ವಾಹ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.
Art
Manuscript
Music
Courtesy:
Transliteration
Bhakta māhēśvara prasādi ī trividha onde bīja;
taleviḍiyilla.
Prāṇaliṅgi śaraṇa aikya intī trividha ondē bīja;
taleviḍiyilla.
Vastu-vastukadante, śile-kāntiyante,
kusuma-gandhadante, pati-satiyante bhakti ghaṭa;
arive vastusvarūpavāgi ṣaḍasthalavanavagavisi ninda svarūpa;
basavaṇṇa cannabasavaṇṇa śaraṇatati muntāda
sid'dhānta ubhayasthala nirvāha.
Śambhuvininditta svayambhuvinindatta atibaḷa nōḍā,
mātuḷaṅga madhukēśvaranu.