Index   ವಚನ - 71    Search  
 
ಮಂಜರಿ ನುಂಗಿದ ಚೂಡ ತನ್ನ ಕಾಲವೇಳೆಗೆ ನಿಂದು ಕೂಗಿದುದುಂಟೆ? ಲಿಂಗವನರಿದ ಚಿತ್ತ ಸಂಸಾರದ ಸಂದಣಿಯಲ್ಲಿ ಮುಳುಗುವುದೆ? ಈ ದ್ವಂದ್ವವನರಿದು ಯೋಗ ಸಂಬಂಧಿಯಾಗಿರಬೇಕು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.