Index   ವಚನ - 72    Search  
 
ಮಣ್ಣಿನಲ್ಲಿ ಹುಟ್ಟಿದ ಹೊನ್ನು, ಕಲ್ಲಿನಲ್ಲಿ ಹುಟ್ಟಿದ ರನ್ನ, ಚಿಪ್ಪಿನಲ್ಲಿ ಹುಟ್ಟಿದ ಮುತ್ತು, ವೃಕ್ಷದಲ್ಲಿ ಹುಟ್ಟಿದ ಗಂಧ ಅವು ತಮ್ಮ ಸ್ವಸ್ಥಾನಂಗಳ ಮೀರಿ ಪರಸ್ಥಾನಂಗಳಲ್ಲಿ ನಿಂದು ಪ್ರಾಪ್ತಿಯನೆಯ್ದುವಂತೆ, ಪಿಂಡ ಅಂಡದಲ್ಲಿ ಹುಟ್ಟಿ ಅಂಡವನಿತಿಗಳೆದು ನಿಜ ಪಿಂಡವಾದಂತೆ, ಗುರುವಿನ ಕರಕಮಲದಲ್ಲಿ ಹುಟ್ಟಿ, ಲಿಂಗಮೂರ್ತಿಯ ಸರ್ವಾಂಗದಲ್ಲಿ ಬೆಳೆದು ಜಂಗಮವಪ್ಪ ನಿರಂಗ ಪ್ರಸಾದದಲ್ಲಿ ಬೆರೆದು ಅವಿರಳನಾದವಂಗೆ ಬಂಧ ಮೋಕ್ಷ ಕರ್ಮಂಗಳ ಬೆಂಬಳಿಗೆ ಸಲ್ಲ! ಅದು ನಿರಂಗವಸ್ತು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.