Index   ವಚನ - 73    Search  
 
ಮರಾಳನ ಗದಕ ತೇಜಿಯ ಚಿತ್ತ ಪನ್ನಗನ ವಳಿ ಹೊಳಹಿನಂತೆ ಘಟಾತ್ಮನ ಭೇದ. ಇದು ನಿರುತ ಸ್ವಯಾನುಭಾವದಿಂದ ಸಂಬಂಧಿಸಿ ಉರಿ ಲೋಹದ ಯೋಗದಂತೆ ಆಗದೆ, ಉರಿ ಕರ್ಪೂರದಿರವಿನಂತೆ ಆಗಬೇಕು. ಇದು ಸಾವಧಾನ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.