Index   ವಚನ - 2    Search  
 
ಆದಿ ಅನಾದಿಯಿಲ್ಲದಿಂದಲತ್ತ, ಮೂದೇವರುದಯವಾಗದಿಂದಲತ್ತ, ಸಚರಾಚರವೇನೂ ಇಲ್ಲದಿಂದಲತ್ತ, ಲೋಕ ಲೌಕಿಕ ಸುಳುಹಿಲ್ಲದಿಂದಲತ್ತ, ತತ್ವಮೊತ್ತಗಳಿಲ್ಲದಿಂದಲತ್ತ, ಏನು ಏನೂ ಇಲ್ಲದಿಂದಲತ್ತ, ನಿರ್ವಯಲ ನಿಜಾನಂದ ನಿರಂಜನ ಚನ್ನಬಸವಲಿಂಗನೇ ತಾನಾಗಿರ್ದನು.