Index   ವಚನ - 15    Search  
 
ಈ ಸಂಸಾರಸುಖವ ಮೆಚ್ಚಿ ಮುಂದೇನರಿಯದೆ ಬಂದುಂಡು ತೊಳಲಿ ಹೋಗುವರು ; ಇನ್ನೆಂದು ಕಳೆದು ಕಾಂಬುವರಯ್ಯಾ? ಪರಿಪರಿಯ ಮಿಥ್ಯ ಕುರುಹಿಂಗೆ ಹರಿಹರಿದು ನೆರೆದು, ಕಿಚ್ಚಿನೊಳು ಅಚ್ಚುತಗೊಂಡು ಅರಿಯದಾದರು ನಿರಂಜನ ಚನ್ನಬಸವಲಿಂಗಾ.