Index   ವಚನ - 21    Search  
 
ತುಂಬಿದ ಪುರದೊಳಗೆ ಸಂಭ್ರಮಸುಖಿ ನಾನಿರಲು ಸುಳಿದಾಡಬಂದವನಾರೊ? ಶಂಭುವಿನವರಿಗಿಂಬುಗೊಡೆ. ಮುಂಬರಿವ ಕರಣಪತಿಯೆನ್ನ ಮಂತ್ರಿ. ಕರಿಯನೇರಿದ ಭೂಪತಿಯೆನ್ನ ಸುತನು. ತಲೆಕೆಳಗೆ ಮಾಡಿ ನಡೆವ ಸೊಸೆಯಂದಿರೈವರ ಬಲವೆನಗುಂಟು. ಇನ್ನೆನಗೆಣೆಯುಂಟೆ ಮೂರುಲೋಕದೊಳಗೆ? ನಿರಂಜನ ಚನ್ನಬಸವಲಿಂಗಾ ಶರಣರಲ್ಲದವರ ಹುಲ್ಲು ಹೊಟ್ಟುಗಳ ಮಾಡಿ ತುಳಿದು ತೂರುವೆ.