Index   ವಚನ - 47    Search  
 
ನ ಗುರೋರಧಿಕಂ ನ ಗುರೋರಧಿಕಂ ನ ಗುರೋರಧಿಕಂ' ಎಂಬ ಶ್ರುತಿಯುಂಟಾಗಿ, ಹರ ಮುನಿದರೆ ಗುರು ಕಾಯ್ವ, ಗುರುಮುನಿದರೆ ಹರ ಕಾಯನೆಂಬ ವಾಕ್ಯ ದಿಟ. ಅದೆಂತೆಂದೊಡೆ: ಪರಶಿವನಾಣತಿವಿಡಿದೈತಂದು ತನುಸಂಗ ಮರವೆಯಾವರಿಸಿದಂದು, ತನ್ನತ್ತ ತಾನೊಯ್ವ ಸತ್ವ ತನಗಿಲ್ಲ. ಮತ್ತೆ ಸುಜ್ಞಾನಗುರುವಾಗಿ ಬಂದೆನ್ನೆಚ್ಚರಿಸಿ, ಕ್ರಿಯಾಘನಗುರುವಾಗಿ ಬಂದೆನ್ನ ಬೋಧಿಸಿ ಅತ್ತಲಾ ಪರಶಿವನ ತಂದೆನ್ನ ಕರ ಮನ ಭಾವದಲ್ಲಿ ತೋರಿ ಕಾಣಿಸಿದ ನಿರಂಜನ ಚನ್ನಬಸವಲಿಂಗ ತಾನೆಂಬ ಭಾವವನು