Index   ವಚನ - 74    Search  
 
ಅಕಳಂಕ ಮಹಿಮಾಚಾರ್ಯನ ನಿರ್ಮಲ ಕಟಾಕ್ಷಮಣಿಯನು ಅರಿದರಿದು ಅವಧರಿಸಿದ ಅಪ್ರತಿಮ ಶರಣಂಗೆ ಅರಿಷಡ್ವರ್ಗಂಗಳು ಮುಟ್ಟಲಮ್ಮವು, ಷಡೂರ್ಮಿಯಂಗಳು ಸ್ಪರ್ಶಿಸಲಮ್ಮವು, ಮರಳಿ ಮುಂದುಗಾಣದಿರ್ದವು ಗುಣಾಳಿ, ಕರ್ಮತ್ರಯಂಗಳಳಿದು ನಿರ್ಮಳ ನಿಲವಾಗಿರ್ದವು ನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.