ಆದಿ ಅನಾದಿವಿಡಿದು ಸಾಧಿಸಿಬಂದ ಪರಮರುದ್ರಾಕ್ಷಿಯನು
ಸದಮಲನಾಗಿ ಸರ್ವಾಂಗದಲ್ಲಿ ಧರಿಸಿ,
ಇಹಪರಾನಂದ ಸುಗ್ಗಿಯೊಳು ಸುಖವಡೆದೆ
ನಿರಂತರ ನಿರಂಜನ ಚನ್ನಬಸವಲಿಂಗ ಸನ್ನಿಹಿತನಾಗಿ.
Art
Manuscript
Music
Courtesy:
Transliteration
Ādi anādiviḍidu sādhisibanda paramarudrākṣiyanu
sadamalanāgi sarvāṅgadalli dharisi,
ihaparānanda suggiyoḷu sukhavaḍede
nirantara niran̄jana cannabasavaliṅga sannihitanāgi.