Index   ವಚನ - 97    Search  
 
ಅಯ್ಯಾ, ಎನ್ನ ಕರಸ್ಥಲದಲ್ಲಿ ಲಿಂಗವು, ಎನ್ನ ಪ್ರಾಣಸ್ಥಲದಲ್ಲಿ ರುದ್ರಾಕ್ಷಿ, ಎನ್ನ ಭಾವಸ್ಥಲದಲ್ಲಿ ಭಸಿತವು, ಎನ್ನ ಅರುಹಿನ ಸ್ಥಲದಲ್ಲಿ ಪ್ರಸಾದ, ಎನ್ನ ಜ್ಞಾನದ ಸ್ಥಲದಲ್ಲಿ ಪಾದೋದಕವು, ಎನ್ನ ಮನದ ಸ್ಥಲದಲ್ಲಿ ಪಂಚಾಕ್ಷರಿ ಸಂಯುಕ್ತವಾಗಿ, ಗುರುನಿರಂಜನ ಚನ್ನಬಸವಲಿಂಗಜಂಗಮಕ್ಕೆ ನಮೋ ನಮೋ ಎನುತಿರ್ದೆನು.