ಅಯ್ಯಾ, ಎನ್ನ ಪರಮ ಗುರುಕರುಣದಿಂದೆ
ಪರಮೇಕಲಿಂಗವೆನ್ನ ಆಚಾರಾಂಗದ
ಮೇಲೆ ಆಯತವಾಯಿತ್ತು.
ಅಯ್ಯಾ, ಎನ್ನ ನಿರ್ಮಲ ಮನದ ಮೇಲೆ
ಪ್ರಾಣಲಿಂಗ ಸ್ವಾಯತವಾಯಿತ್ತು.
ಅಯ್ಯಾ, ಎನ್ನ ಸದ್ಭಾವದ ಮೇಲೆ
ಭಾವಲಿಂಗ ಸನ್ನಿಹಿತವಾಯಿತ್ತು.
ಅಯ್ಯಾ, ಎನ್ನ ಸರ್ವಾಂಗದಲ್ಲಿ
ಷಡಕ್ಷರ ಬೆಳಗುತ ಮಹಾಶೂನ್ಯವಾಗಿರ್ದುದು
ನಿರಂತರ ಗುರುನಿರಂಜನ ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Ayyā, enna parama gurukaruṇadinde
paramēkaliṅgavenna ācārāṅgada
mēle āyatavāyittu.
Ayyā, enna nirmala manada mēle
prāṇaliṅga svāyatavāyittu.
Ayyā, enna sadbhāvada mēle
bhāvaliṅga sannihitavāyittu.
Ayyā, enna sarvāṅgadalli
ṣaḍakṣara beḷaguta mahāśūn'yavāgirdudu
nirantara guruniran̄jana cannabasavaliṅgadalli.