ಕಂಗಳು ಬದುಕುತಲಿರ್ದವು ನಿಮ್ಮ ರೂಪವ ಕಾಣಲು.
ಕರ್ಣವಾಲಿಸಿ ಸುಯ್ಗರೆಯುತಿರ್ದವು
ನಿಮ್ಮ ನುಡಿಯನಾಲಿಸೆ.
ಹಸ್ತಂಗಳು, ನಿಮ್ಮ ಉಪಚಾರಕ್ಕೆಳಸಿ ಕಳವಳಿಸುತಿರ್ದವು
ಚರಣಗಳುಲಿದು ಹೆಜ್ಜೆದುಡುಕುತಿರ್ದವು ನಿಮ್ಮ ಬರವ ಭಾವಿಸುತ.
ಹೃದಯ ವಿಕಸನವಾಗಿ ಮುಂಬಾಗುತಿದೆ
ನಿಮ್ಮ ಸತ್ಕ್ರಿಯೆ ಸಮರಸಸುಖವನಿಚ್ಫೈಸಿ-
ಗುರುನಿರಂಜನ ಚನ್ನಬಸವಲಿಂಗ,
ನಿಮ್ಮ ಬರವಿಂಗೆ ಸದ್ಭಕ್ತನವಯವಂಗಳು.