Index   ವಚನ - 143    Search  
 
ನಡೆದು ಕಂಡವರೆಂದು ನುಡಿದು ಸಿಲುಕಿ ಬಿದ್ದು ಹೋಗುವ ಪಾತಕರು ಒಡೆಯನವಸರವನವರೆತ್ತ ಬಲ್ಲರೋ! ಮಾಂಸಕ್ಕೆ ಬಿದ್ದ ಶುನಿಭಾವದಂತೆ ಕೊಡುಕೊಳ್ಳೆ ಬೆಳೆಯುಂಟು ಕಾಲನಲ್ಲಿ, ಅರಿದು ಮರೆದವರಂತಲ್ಲ ಕೊಡುಕೊಳ್ಳೆ ಬೆಳೆಯುಂಟು ಗುರುನಿರಂಜನ ಚನ್ನಬಸವಲಿಂಗಾ.