Index   ವಚನ - 144    Search  
 
ಕತ್ತಲ ಸುತ್ತಿನಲ್ಲಿ ಸುಳಿದಾಡುವ ಕತ್ತೆಯ ತಂದು ಜೀನವನಿಟ್ಟರೆ ಹೊತ್ತೇರೆ ಕುದುರೆಯಾಗಲರಿಯದು. ಹುಸಿಯನುಂಬ ಹಸಿಮಾನವನು ತಾಮಸವಿರ್ದಂತೆ ತಂದು ಭಕ್ತನಮಾಡಿದರೆ ಗತಿ ಬೆಳಗಿನಲ್ಲಿ ಕಂಡರೆ ಭಕ್ತನಾದಾನೇ ನರನಲ್ಲದೆ ಗುರುನಿರಂಜನ ಚನ್ನಬಸವಲಿಂಗಕ್ಕೆ.