Index   ವಚನ - 146    Search  
 
ಸಿಂಹನ ಹಾಲ ಆನೆಯಮರಿ ಉಣಬಲ್ಲುದೆ? ಹುಲಿಯ ಹಾಲ ಹುಲ್ಲೆಯಮರಿ ಉಣಬಲ್ಲುದೆ? ಗರುಡನಿಂದೆ ಗುಟುಕ ಹಂದಿಯಮರಿ ಕೊಳಬಲ್ಲುದೆ, ತಮ್ಮ ಮರಿಯಲ್ಲದೆ? ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಘನಗಂಭೀರ ಗುರುಚರಲಿಂಗದ ದಯರಸವನುಣಬಲ್ಲರೆ ಮಲಭುಂಜಕರು? ನಿಮ್ಮವರಲ್ಲದೆ.