Index   ವಚನ - 160    Search  
 
ಅಭೇದನಖಂಡ ಪರಶಿವಲಿಂಗವೆನ್ನ ಕುರಿತು, ಸುಭೇದಸುಪ್ರಕಾಶತ್ರಯವಾಗಿ, ಕ್ರಿಯಾಪಾದ, ಜ್ಞಾನಪಾದ, ಚರ್ಯಾಪಾದವೆಂಬ ಪಾದತ್ರಯಕ್ಕನುಗೈದು ಬಂದಲ್ಲಿ, ಕರಣತ್ರಯ ಕರ್ಮವಿರಹಿತನಾಗಿ, ಕಾರ್ಯದಿಂದರ್ಚಿಸಿ ಮಾಡಿ ಆನಂದಿಸುವೆ ಗುರುವಿನೊಳು ಲಿಂಗಜಂಗಮವ ಕಂಡು. ಮನದಿಂದರ್ಚಿಸಿ ಮಾಡಿ ಆನಂದಿಸುವೆ ಲಿಂಗದಲ್ಲಿ ಜಂಗಮಗುರುವ ಕಂಡು. ಪ್ರಾಣದಲ್ಲಿ ಅರ್ಚಿಸಿ ಮಾಡಿ ಆನಂದಿಸುವೆ ಜಂಗಮದಲ್ಲಿ ಗುರುಲಿಂಗವ ಕಂಡು. ಅರ್ಥ ಪ್ರಾಣ ಅಭಿಮಾನವಿಲ್ಲ ಗುರುನಿರಂಜನ ಚನ್ನಬಸವಲಿಂಗ.