Index   ವಚನ - 162    Search  
 
ಆಕಾಶದ ಬೆಳಗು ಲೋಕೇಶನ ಮಠಕ್ಕೆ ಬಂದಲ್ಲಿ ಅನೇಕರು ಕೊಡನೊಡೆದು ನೀರಿಗೆ ಬಂದರು ನೋಡಾ! ಲೋಕೇಶ ಕೂಡಿ ದಾರಿ ತಪ್ಪಿಸಿ, ಮಾರ್ಗವಿಡಿದು ಕಪ್ಪವ ಕೊಟ್ಟು ತನ್ನ ತಪ್ಪಿಸಿಕೊಂಡರೆ ಒಪ್ಪಾಯಿತ್ತು ಗುರುನಿರಂಜನ ಚನ್ನಬಸವಲಿಂಗಕ್ಕೆ ಭಕ್ತಿ.