Index   ವಚನ - 168    Search  
 
ಅಯ್ಯಾ, ಭಕ್ತಿವಿರಹಿತ ಗುರುವನರಿಯಬಾರದು. ನಿಷ್ಠೆವಿರಹಿತ ಲಿಂಗವನರಿಯಬಾರದು. ಸಾವಧಾನವಿರಹಿತ ಪ್ರಸಾದವನರಿಯಬಾರದು. ಅನುಭಾವವಿರಹಿತ ಜಂಗಮವನರಿಯಬಾರದು. ಆನಂದವಿರಹಿತ ಪಾದೋದಕವನರಿಯಬಾರದು. ಸಮರಸವಿರಹಿತ ಮಹಾನುಭಾವಸಂಗವನರಿಯಬಾರದು. ಇದು ಕಾರಣ, ಭಕ್ತಿಶೂನ್ಯನಾದಲ್ಲಿ ಭವದಿಂದತ್ತ ಕಾಣನು ಗುರುನಿರಂಜನ ಚನ್ನಬಸವಲಿಂಗದ ನಿಜವ.