Index   ವಚನ - 170    Search  
 
ಅಯ್ಯಾ, ಎನ್ನ ತನುಶುದ್ಧವ ಕಂಡು ಸೇವೆಯ ಕೊಳ್ಳಯ್ಯಾ. ಲಿಂಗಯ್ಯಾ, ಎನ್ನ ಮನಶುದ್ಧವ ಕಂಡು ಪೂಜೆಯ ಕೊಳ್ಳಯ್ಯಾ. ಸಂಗಯ್ಯಾ, ಎನ್ನ ಪ್ರಾಣಶುದ್ಧವ ಕಂಡು ದಾಸೋಹವ ಕೊಳ್ಳಯ್ಯಾ. ಎಲೆ ಅಯ್ಯಾ, ಎನ್ನ ಭಾವಶುದ್ಧವ ಬಂದು ಕೂಡಯ್ಯಾ. ಗುರುನಿರಂಜನ ಚನ್ನಬಸವಲಿಂಗಯ್ಯಾ ತಪ್ಪೆನ್ನದು ತಪ್ಪೆನ್ನದು.