ನಾಚಿಕೆಯಿಲ್ಲದ ಹೆಂಡತಿ, ಗುಣವಿಲ್ಲದ
ಗಂಡನ ಮದುವೆಯ ನಿಬ್ಬಣದಲ್ಲಿ,
ಮಿಂಡರ ಗುದ್ದಾಟ ಘನವಾಯಿತ್ತು ನೋಡಾ!
ಚೆನ್ನೆಯ ಜವ್ವನದ ಸುಖವ ಚನ್ನಿಗರು
ಮೋಹಿಸಿ ಭೋಗವ ಮಾಡಿದರೆ,
ಗುರುನಿರಂಜನ ಚನ್ನಬಸವಲಿಂಗಕ್ಕೆ
ಪರಿಣಾಮವಾಯಿತ್ತು.
Art
Manuscript
Music
Courtesy:
Transliteration
Nācikeyillada heṇḍati, guṇavillada
gaṇḍana maduveya nibbaṇadalli,
miṇḍara guddāṭa ghanavāyittu nōḍā!
Cenneya javvanada sukhava cannigaru
mōhisi bhōgava māḍidare,
guruniran̄jana cannabasavaliṅgakke
pariṇāmavāyittu.