Index   ವಚನ - 178    Search  
 
ಅಂಗವಿಲ್ಲದೆ ಸಂಗಸನ್ನಿಹಿತ ಜಂಗಮವೆನ್ನಲ್ಲಿಗೈತಂದರೆ, ಮಂಗಳಾರತಿಯನೆತ್ತಿ, ಎನ್ನ ಸಂಗ ಎನ್ನ ಅಂಗ ಮನ ಭಾವಂಗಳೊಪ್ಪಿ ಕರೆತರುವೆ ಕೇಳಿರವ್ವಾ! ಬಂದ ಬರವ ಕಂಡು ಕರಣತ್ರಯ ಕೈಗೂಡಿ ಮಾಡುವೆ ನೀವು ಮೆಚ್ಚುವಂತೆ ಕೇಳಿರವ್ವ ಕೆಳದಿಯರೆಲ್ಲ. ಮತ್ತೆ ನಿಮ್ಮ ನಿಲವೆನ್ನವೊಳಹೊರಗೆ ಸಯವಾದರೆ ಗುರುನಿರಂಜನ ಚನ್ನಬಸವಲಿಂಗದೊಲುಮೆ ನಿತ್ಯ ಕಾಣಿರವ್ವಾ.