Index   ವಚನ - 194    Search  
 
ಅರುವಿನ ಮಂದಿರದೊಳಡಗಿರ್ದ ಅಜಗಣ್ಣ ಮೂರುತಿಯ ಮೂಜಗದ ಮೇಲೆ ಸ್ಥಾಪಿಸಿ, ಗಜಬಜೆಯ ಬೆಳಗ ಹರಹಿದಲ್ಲಿ ಶ್ರದ್ಧೆಯೆಡೆಗೊಂಡಿತ್ತು, ನಿಷ್ಠೆಯಾವರಿಸಿತ್ತು, ಸಾವಧಾನ ಸಮವೇದಿಸಿತ್ತು, ಅನುಭಾವ ಮುಸುಗಿತ್ತು, ಆನಂದ ತಲೆದೋರಿತ್ತು. ಸಮರಸದಲ್ಲಿ ನಿಂದು ಪರವಶನಾದಲ್ಲಿ ಮುಂದೆ ಗುರುನಿರಂಜನ ಚನ್ನಬಸವಲಿಂಗವೆನ್ನ ಕೈಪಿಡಿದ ಮಹಾಲಿಂಗವಾಗಿ.