Index   ವಚನ - 200    Search  
 
ಅಂಗವಿಲ್ಲದ ಭಕ್ತನ ಶೃಂಗಾರವ ನೋಡಾ! ಮನವಿಲ್ಲದ ಭಕ್ತನ ಮಚ್ಚು ನೋಡಾ! ಪ್ರಾಣವಿಲ್ಲದ ಭಕ್ತನ ಘನವ ನೋಡಾ! ಭಾವವಿಲ್ಲದ ಭಕ್ತನ ಸುವಿಚಾರವ ನೋಡಾ! ಪರಿಜ್ಞಾನವಿಲ್ಲದ ಭಕ್ತನ ಇರವ ನೋಡಾ! ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಮರಸವ ನೋಡಾ!