ಅಯ್ಯಾ, ಗುರುಲಿಂಗವೆನ್ನ ಕುರಿತು ಕರಸ್ಥಲಕ್ಕೆ ಬಂದ ಬಳಿಕ
ನೆರೆಹೊರೆಯವರತ್ತ ಸಾರಿ, ಕೆಂಚಕೆಡಿಗರತ್ತ ಸಾರಿ,
ಬಿಳಿಯ ಬೆಂಗಡಿಗರತ್ತ ಸಾರಿ, ಕರಿಯಗೊಂದಣಿಗರತ್ತ ಸಾರಿ,
ಮುಂದೆ ಹುಣ್ಣಿವೆಗಮ್ಮಯ್ಯನ ಯಾತ್ರೆ ಬೇಕಾದರೆ
ಅಮಾವಾಸ್ಯೆಯ ಕಳೆದು ಅಂಗ ಮಡಿಯಾಗಿ
ಕಂಗಳ ಮುಂದೆ ಬಂದರೆ
ಸಂಗಯ್ಯನ ತೇರು ಸುಖದಿಂದೆ ರಂಗಮಂಟಪಕ್ಕೆ ಸಾಗಿ,
ಧರೆಯಾಕಾಶ ತುಂಬಿದ ಪರಿಸೆ
ಹರಹರ ಶಿವಶಿವ ಜಯಜಯ ಚಾಂಗು ಭಲೆಯೆಂದು
ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ ಓಲ್ಯಾಡುವ ಬನ್ನಿರಿ.