Index   ವಚನ - 211    Search  
 
ಪ್ರಾಣವೇ ಜಂಗಮವೆಂದರಿದು ಮಾಡುವಲ್ಲಿ ಮನಕೆ ಮನ ಸಾಕ್ಷಿಯಾಗಿಹನಲ್ಲದೆ, ಬೇರಿಟ್ಟು ಮಾಡಿ ತೋರುವ ಭಾವಗಡಕ ಭ್ರಾಂತನಲ್ಲ, ಅದೆಂತೆಂದೊಡೆ: ಪತಿವ್ರತಾಂಗನೆ ತನ್ನ ಪ್ರಾಣಸುಖವ ಪುರುಷಂಗಿತ್ತು ಸುಖಿಸಿ ಆನಂದಿಸುವಳಲ್ಲದೆ ಬೇರಿಟ್ಟು ತೋರಲಿಲ್ಲ. ಇದರಂದವನರಿದು ನಡೆನುಡಿಯೊಳಿರ್ದನು ಗುರುನಿರಂಜನ ಚನ್ನಬಸವಲಿಂಗಸಹಿತ.