Index   ವಚನ - 222    Search  
 
ಕನಕದ ಮನೆಯೊಳಗೆ ಕಲ್ಪವೃಕ್ಷವ ಬೆಳೆದು ಕೈಯಲ್ಲಿ ಚಿಂತಾಮಣಿಯಿರಲು, ಕೈಕೂಲಿಮಾಡಿ ಕಷ್ಟಬಡುವನಂತೆ! ಸದ್ಗುರುನಾಥನ ಕೃಪೆಯಿಂದೆ ತ್ರಿವಿಧನುಗ್ರಹವೆಂಬಾಲಯದೊಳಗೆ ಸರ್ವಾಚಾರಸಂಪತ್ತು ಪಸರಿಸಿ, ಕರಸ್ಥಲದಲ್ಲಿ ಚಿಂತಿತಾರ್ಥವನೀವ ಚಿನ್ಮಯಮೂರುತಿಯಿರಲು, ಅದನರಿದು ಮುಕ್ತಿಯನೈದಲರಿಯದೆ, ಬರುಕಾಯನಾಗಿ ಅಷ್ಟಾಂಗಯೋಗದಿಂದೆ ಕಷ್ಟಬಡುವ ಭ್ರಷ್ಟಭವಿಗಳನೇನೆಂಬೆನಯ್ಯಾ! ಅದಲ್ಲದೆ ರಾಷ್ಟ್ರದೊಳಗುಳ್ಳ ಕ್ಷೇತ್ರ ಸ್ಥಾವರ ನದಿಗಳ ಕಂಡು ಬದುಕುವೆನೆಂದು, ತನುಮನವ ದಂಡಿಸುವ ದಿಂಡಿಯದ್ವೈತರನೆಂತೆಂಬೆನಯ್ಯಾ? ನಾಲಿಗಿಲ್ಲದ ರುಚಿಯನರಿದವರುಂಟೆ ಗುರುನಿರಂಜನ ಚನ್ನಬಸವಲಿಂಗಾ?